Saturday, October 30, 2010

'ಹಾರದ ಹಕ್ಕಿ'- ಹೌದಾ??!!

ಆಸ್ಟ್ರಿಚ್ 
 'ಹಾರದ ಹಕ್ಕಿ'- ಹೌದಾ??!!

ಹಕ್ಕಿ ಎಂದರೆ ಮೂಡುವ ಚಿತ್ರ ಒಂದೇ: 'ರೆಕ್ಕೆಗಳನ್ನು ತೆರದು ಮುಗಿಲಲ್ಲಿ ತೇಲುತ್ತಿರುವ ಜೀವಿ' ಆದ್ದರಿಂದಲೇ ಹಕ್ಕಿ ಎಂದರೆ ಹಾರುವ ಜೀವಿ ಎಂದೇ ಪ್ರಸಿದ್ದ. ಹಾರಾಟ ಸಾಮರ್ಥ್ಯದಿಂದಾಗಿಯೇ ಹಕ್ಕಿಗಳಿಗೆ ಆಕಾಶಯಾನದ ಶಕ್ತಿ; ಶತ್ರುಗಳಿಂದ ರಕ್ಷೆ; ವಲಸೆ ಹೋಗಬಲ್ಲ ಬಲ. ತನ್ಮೂಲಕ ಕೆಟ್ಟ ಹವೆಯಿಂದ, ಆಹಾರದ ಅಭಾವದಿಂದ ಮುಕ್ತಿ.

ಹಾಗೆಲ್ಲ ಇದ್ದರೂ ಪಕ್ಷಿ ಪ್ರಪಂಚದಲ್ಲಿ ಹಾರಬಲ್ಲ ಶಕ್ತಿಯೇ ಇಲ್ಲದ ಪ್ರಬೇದಗಳು ಹಲವಾರಿವೆ: 'ಆಸ್ಟ್ರಿಚ್, ಎಮು, ಕಿವಿ, ಕಕಾಪೋ, ಕಾಗು, ಟಕಾಹೆ .... ಇತ್ಯಾದಿ. ವಾಸ್ತವ ಏನಂದರೆ ಹಾರಾಟ ಸಾಮರ್ಥ್ಯ ಯಾವ ಹಕ್ಕಿಗೂ ಪ್ರಿಯವಾದದ್ಧಲ್ಲ. ಸೂಕ್ತ ಅವಕಾಶ ಒದಗಿದರೆ ಎಲ್ಲ ಹಕ್ಕಿಗಳು ಹಾರಾಟ ಕೈಬಿಟ್ಟು ನೆಲವಾಸಿಗಳಗಿರಲೇ ಬಯಸುತ್ತವೆ. ಅಂಥಹ ಹೇರಳ ನಿದರ್ಶನಗಳು ಜಗದದ್ಯಂಥ ಪಕ್ಷಿ ಪ್ರಪಂಚದಲ್ಲಿ ಕಾಣಸಿಗುತ್ತದೆ.

ಹಾಗಾದರೆ ಹಾರಾಟ ಹಕ್ಕಿಗಳಿಗೆ ಏಕೆ ಬೇಡ??
ಅದಕ್ಕೆ ಕಾರಣ ತುಂಬ ಸ್ಪಷ್ಟ: ಹಾರಾಟ ತುಂಬ ತ್ರಾಸದಾಯಕ ಕೆಲಸ; ವಿಪರೀತ ಶಕ್ತಿ ವ್ಯವಾಗುವ ಕೆಲಸ. ಹಾಗಾಗಿ ಹಕ್ಕಿಗಳಿಗೆ 'ರಾಕ್ಷಸ ಹಸಿವು.' ಆದ್ದರಿಂದಲೇ ಪ್ರತಿಯೊಂದು ಹಕ್ಕಿಯು ಪ್ರತಿದಿನವೂ ಅದರ ಶರೀರ ತೂಕದ ಶೇಕಡಾ ೩೦(30)ರಷ್ಟು ಪ್ರಮಾಣದ ಆಹಾರವನ್ನು ಸೇವಿಸಲೇಬೇಕು.
ವರ್ಷಪೂರ್ತಿ ಪ್ರತಿದಿನ- ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ- ಇಷ್ಟು ಭಾರಿ ಪ್ರಮಾಣದ ಆಹಾರದ ಅನ್ವೇಷಣೆ- ಗಳಿಕೆ ತುಂಬ ಕಷ್ಟದಾಯಕ. ಅದಕ್ಕೆ ಹಾರುವ ಹಕ್ಕಿಗಳು ಮುಂಜಾನೆಯಿಂದ ಮುಸ್ಸಂಜೆವರೆಗೂ ಎಡಬಿಡದೆ ಕ್ರಿಯಾಶೀಳವಾಗಿರುತ್ತವೆ. ಚಳಿಗಾಲದಲ್ಲಿ ಸಾವಿರಾರು ಕಿಲೋಮೀಟರ್ ದೂರದ ಬೆಚ್ಚನೆಯ ಪ್ರದೇಶಗಳಿಗೆ, ಸಮೃದ್ದ ಆಹಾರಾದ ನೆಲೆಗಳಿಗೆ, ವಲಸೆಯಾನ ಕೈಗೊಲ್ಲುತವೆ. ದಾರಿಯಲ್ಲಿ ನಾನ ಅಪಾಯಗಳಿಗೆ ಸಿಲುಕಿ ಹೇರಳ ಸಂಕ್ಯೆಯಲ್ಲಿ ಪ್ರಾಣಬಿಡುತ್ತವೆ . ಹಾರುವ ಹಕ್ಕಿಗಳಿಗೆ ವಿಶ್ರಾಂತಿ- ನೆಮ್ಮದಿ ಎರಡು ದುಸ್ತರ. ಆದ್ದರಿಂದಲೇ ಹಾರಬಲ್ಲ ಹಕ್ಕಿಗಳಲ್ಲಿ ಅಲ್ಪಾಯುಷಿ ಪ್ರಬೇದಾಗಲೇ ಅತ್ಯಾಧಿಕ.

ಅದೇ ಹಾರದ ಹಕ್ಕಿಗಳ ಬದುಕು ಎಷ್ಟೆಲ್ಲಾ ಜಟಿಲವಲ್ಲ ಇಂಥ ಹಕ್ಕಿಗಳಿಗೆ ಅವುಗಳ ಶರೀರ ತೂಕದ ಶೇಕಡ ೪(4)ರಷ್ಟೇ ಪ್ರಮಾಣದ ಆಹಾರ ಸಾಕು. ಆದ್ದರಿಂದಲೇ ಅವುಗಳದು ಗಡಿಬಿಡಿ ಇಲ್ಲದ, ಒಥದ ಇಲ್ಲದ, ವಲಸೆ ಅಗತ್ಯ ಇಲ್ಲದ ಜೀವನ. ಈ ಕಾರಣದಿಂದಲೇ ಶತ್ರುಮುಕ್ಥವಾದ, ಆಹಾರಸಂರುದ್ಧಿ ಇರುವ ಎಲ್ಲೆಡೆ ಹಾರಾಟ ಕೈಬಿದಲೇ ಎಲ್ಲ ಹಕ್ಕಿಗಳು ಸಿದ್ದ.- ಸಂಗ್ರಹ

1 comment:

  1. ಹಲೋ! ಒಳ್ಳೆ ಮಾಹತಿ ಕೊಟ್ಟಿದ್ದೀರಿ ಥ್ಯಾಂಕ್ಸ್!

    ReplyDelete