Saturday, October 30, 2010

'ಹಾರದ ಹಕ್ಕಿ'- ಹೌದಾ??!!

ಆಸ್ಟ್ರಿಚ್ 
 'ಹಾರದ ಹಕ್ಕಿ'- ಹೌದಾ??!!

ಹಕ್ಕಿ ಎಂದರೆ ಮೂಡುವ ಚಿತ್ರ ಒಂದೇ: 'ರೆಕ್ಕೆಗಳನ್ನು ತೆರದು ಮುಗಿಲಲ್ಲಿ ತೇಲುತ್ತಿರುವ ಜೀವಿ' ಆದ್ದರಿಂದಲೇ ಹಕ್ಕಿ ಎಂದರೆ ಹಾರುವ ಜೀವಿ ಎಂದೇ ಪ್ರಸಿದ್ದ. ಹಾರಾಟ ಸಾಮರ್ಥ್ಯದಿಂದಾಗಿಯೇ ಹಕ್ಕಿಗಳಿಗೆ ಆಕಾಶಯಾನದ ಶಕ್ತಿ; ಶತ್ರುಗಳಿಂದ ರಕ್ಷೆ; ವಲಸೆ ಹೋಗಬಲ್ಲ ಬಲ. ತನ್ಮೂಲಕ ಕೆಟ್ಟ ಹವೆಯಿಂದ, ಆಹಾರದ ಅಭಾವದಿಂದ ಮುಕ್ತಿ.

ಹಾಗೆಲ್ಲ ಇದ್ದರೂ ಪಕ್ಷಿ ಪ್ರಪಂಚದಲ್ಲಿ ಹಾರಬಲ್ಲ ಶಕ್ತಿಯೇ ಇಲ್ಲದ ಪ್ರಬೇದಗಳು ಹಲವಾರಿವೆ: 'ಆಸ್ಟ್ರಿಚ್, ಎಮು, ಕಿವಿ, ಕಕಾಪೋ, ಕಾಗು, ಟಕಾಹೆ .... ಇತ್ಯಾದಿ. ವಾಸ್ತವ ಏನಂದರೆ ಹಾರಾಟ ಸಾಮರ್ಥ್ಯ ಯಾವ ಹಕ್ಕಿಗೂ ಪ್ರಿಯವಾದದ್ಧಲ್ಲ. ಸೂಕ್ತ ಅವಕಾಶ ಒದಗಿದರೆ ಎಲ್ಲ ಹಕ್ಕಿಗಳು ಹಾರಾಟ ಕೈಬಿಟ್ಟು ನೆಲವಾಸಿಗಳಗಿರಲೇ ಬಯಸುತ್ತವೆ. ಅಂಥಹ ಹೇರಳ ನಿದರ್ಶನಗಳು ಜಗದದ್ಯಂಥ ಪಕ್ಷಿ ಪ್ರಪಂಚದಲ್ಲಿ ಕಾಣಸಿಗುತ್ತದೆ.

ಹಾಗಾದರೆ ಹಾರಾಟ ಹಕ್ಕಿಗಳಿಗೆ ಏಕೆ ಬೇಡ??
ಅದಕ್ಕೆ ಕಾರಣ ತುಂಬ ಸ್ಪಷ್ಟ: ಹಾರಾಟ ತುಂಬ ತ್ರಾಸದಾಯಕ ಕೆಲಸ; ವಿಪರೀತ ಶಕ್ತಿ ವ್ಯವಾಗುವ ಕೆಲಸ. ಹಾಗಾಗಿ ಹಕ್ಕಿಗಳಿಗೆ 'ರಾಕ್ಷಸ ಹಸಿವು.' ಆದ್ದರಿಂದಲೇ ಪ್ರತಿಯೊಂದು ಹಕ್ಕಿಯು ಪ್ರತಿದಿನವೂ ಅದರ ಶರೀರ ತೂಕದ ಶೇಕಡಾ ೩೦(30)ರಷ್ಟು ಪ್ರಮಾಣದ ಆಹಾರವನ್ನು ಸೇವಿಸಲೇಬೇಕು.
ವರ್ಷಪೂರ್ತಿ ಪ್ರತಿದಿನ- ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ- ಇಷ್ಟು ಭಾರಿ ಪ್ರಮಾಣದ ಆಹಾರದ ಅನ್ವೇಷಣೆ- ಗಳಿಕೆ ತುಂಬ ಕಷ್ಟದಾಯಕ. ಅದಕ್ಕೆ ಹಾರುವ ಹಕ್ಕಿಗಳು ಮುಂಜಾನೆಯಿಂದ ಮುಸ್ಸಂಜೆವರೆಗೂ ಎಡಬಿಡದೆ ಕ್ರಿಯಾಶೀಳವಾಗಿರುತ್ತವೆ. ಚಳಿಗಾಲದಲ್ಲಿ ಸಾವಿರಾರು ಕಿಲೋಮೀಟರ್ ದೂರದ ಬೆಚ್ಚನೆಯ ಪ್ರದೇಶಗಳಿಗೆ, ಸಮೃದ್ದ ಆಹಾರಾದ ನೆಲೆಗಳಿಗೆ, ವಲಸೆಯಾನ ಕೈಗೊಲ್ಲುತವೆ. ದಾರಿಯಲ್ಲಿ ನಾನ ಅಪಾಯಗಳಿಗೆ ಸಿಲುಕಿ ಹೇರಳ ಸಂಕ್ಯೆಯಲ್ಲಿ ಪ್ರಾಣಬಿಡುತ್ತವೆ . ಹಾರುವ ಹಕ್ಕಿಗಳಿಗೆ ವಿಶ್ರಾಂತಿ- ನೆಮ್ಮದಿ ಎರಡು ದುಸ್ತರ. ಆದ್ದರಿಂದಲೇ ಹಾರಬಲ್ಲ ಹಕ್ಕಿಗಳಲ್ಲಿ ಅಲ್ಪಾಯುಷಿ ಪ್ರಬೇದಾಗಲೇ ಅತ್ಯಾಧಿಕ.

ಅದೇ ಹಾರದ ಹಕ್ಕಿಗಳ ಬದುಕು ಎಷ್ಟೆಲ್ಲಾ ಜಟಿಲವಲ್ಲ ಇಂಥ ಹಕ್ಕಿಗಳಿಗೆ ಅವುಗಳ ಶರೀರ ತೂಕದ ಶೇಕಡ ೪(4)ರಷ್ಟೇ ಪ್ರಮಾಣದ ಆಹಾರ ಸಾಕು. ಆದ್ದರಿಂದಲೇ ಅವುಗಳದು ಗಡಿಬಿಡಿ ಇಲ್ಲದ, ಒಥದ ಇಲ್ಲದ, ವಲಸೆ ಅಗತ್ಯ ಇಲ್ಲದ ಜೀವನ. ಈ ಕಾರಣದಿಂದಲೇ ಶತ್ರುಮುಕ್ಥವಾದ, ಆಹಾರಸಂರುದ್ಧಿ ಇರುವ ಎಲ್ಲೆಡೆ ಹಾರಾಟ ಕೈಬಿದಲೇ ಎಲ್ಲ ಹಕ್ಕಿಗಳು ಸಿದ್ದ.- ಸಂಗ್ರಹ

Friday, October 29, 2010

How do they calculate TRP and where??

ಟಿ.ಅರ್.ಪಿ.:- ಟೆಲಿವಿಷನ್  ರೇಟಿಂಗ್ ಪಾಯಿoಟ್ಸ್.  ಇದು ಒಂದು ಟೆಲಿವಿಷನ್ ಅಥವಾ ಅದರಿಂದ ಬಿಥರಿಸಲ್ಪಟ್ಟ ಕಾರ್ಯಕ್ರಮವು ಎಷ್ಟು ಜನಪ್ರಿಯವಾಗಿದೆ ಅಥವಾ ಪ್ರತಿಶತ ಎಷ್ಟು ವೀಕ್ಷಕರನ್ನು ತಲುಪಿದೆ ಎಂದು ತಿಳಿಸುವ ಅಳತೆಗೋಲು. ಈ ಮಾಪನ ಟೆಲಿವಿಷನ್ನ ಜಾಹಿರತುದಾರರಿಗೆ ಬಹು ಉಪಯೋಗಿ. ಈ ಮಾನದಂಡವನ್ನು ಕಂಡುಹಿಡಿಯಲು ಭಾರತದಲ್ಲಿ ಕೆಲಸ ಮಾಡುತಿರುವ ಏಕೈಕ  ಸಂಸ್ಥೆ  'ಇಂಡಿಯನ್  ಟೆಲಿವಿಷನ್ ಆಡಿಯನ್ಚೆ ಮೆಜರ್ಮೆಂಟ್'

'ಇಂಡಿಯನ್  ಟೆಲಿವಿಷನ್ ಆಡಿಯನ್ಚೆ ಮೆಜರ್ಮೆಂಟ್'
ಎದು ಟೆಲಿವಿಷನ್ ರೇಟಿಂಗ್ ಪಾಯಿoಟ್ಸ್ ಕಂಡುಹಿಡಿಯಲು ಎರಡು ಬೇರೆ ಬೇರೆ ಪಧಥಿಯನ್ನು ಅನುಸರಿಸುತದೆ.

೧. ವಿವಿದ ಚಾನೆಲ್ಗಳ ವೀಕ್ಷಣೆಯನ್ನು ದಾಖಲಿಸುವುದು (Frequency monitoring)
ಈ ವಿಧಾನದಲ್ಲಿ ಕೆಲವು ಆಯ್ದ ವೀಕ್ಷಕರ ಟೆಲಿವಿಷನ್ನಲ್ಲಿ ಎಲಕ್ಟ್ರಾನಿಕ್ ಮೀಟರ್ ಅಳವಡಿಸಿ ಎದು ಆ ಟೆಲಿವಿಷನ್ನಲ್ಲಿ ಯಾವ್ಯಾವ ತರಂಗಾಂಥರದ ಚಾನೆಲ್ ಎಷ್ಟು ವೀಕ್ಷಿಸಲ್ಪಟಿತು ಎಂಬುದನ್ನು ದಾಖಲಿಸುತದೆ. ನಂತರ ಆಯ್ಧ ವೀಕ್ಷಕರ ಎಲ್ಲ ಟೆಲಿವಿಷನ್ ದಾಖಲೆಗಳನ್ನು ಚಾನೆಲ್ ಹೆಸರಿಗೆ ಪರಿವರ್ತಿಸಿ, ಮಾಪನ ಸಂಸ್ಥೆಯವರು ಪೂರಾ ಧೇಶದ ಅಳತೆಗೋಲು ಎಷ್ಟು ಎಂಬುದನ್ನು ಪ್ರಕತಿಸುಥಾರೆ. ಆದರೆ ಈ ವಿಧಾನದಲ್ಲಿ ಅದರದೇ ಆದ ನ್ಯುನ್ಯಥೆಗಳಿವೆ.
 
  ಅ. ಈ ಉಪಕರಣದ ಬೆಲೆ ಜಾಸ್ತಿ ಮತ್ತು ಹೊರದೇಶದಿಂದ ತರಿಸಬೇಕು.
  ಆ. ಕೇಬಲ್ ಆಪರೇಟರ್ಗಳು ಪದೇ ಪದೇ ಚಾನೆಲ್ಗಳು ತರಂಗಂಥರಗಳನ್ನು ಬದಲಿಸುವುದು.
  ಎ.ಥರನ್ಗಾಂಥಾರದ ವ್ಯತ್ಯಾಸದಿಂದ ದಾಕ್ಕಲೆಗಳು ತಪ್ಪು ಗ್ರಹಿಕೆಯಿಂದಾಗುವ ಮಾಪನದ ಏರುಪೇರು.

೨. ದೃಶ್ಯ ಚಿತ್ರೀಕರಣ ಹೋಲಿಸುವ ವಿದಾನ (picture matching technique) ಎರಡನೆಯ ವಿದಾನ ಹೆಚ್ಚು ನಂಬಲರ್ಹವಾದುದು ಮತ್ತು ಭಾರತದಲ್ಲಿ ಹೊಸದಾಗಿ ಉಪಯೋಗಿಸಲ್ಪಡುತಿರುವುದು. ಇದರಲ್ಲಿ ನೀವು ನೋಡುವ ಕಾರ್ಯಕ್ರಮದ ದೃಶ್ಯಗಳ ಅತಿ ಸ್ವಲ್ಪ ಭಾಗವನ್ನು ಎಲಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಮುದ್ರಿಸಲಾಗುತದೆ. ಹಾಗು ಈ ಸಂಸ್ಥೆಯ ಎಲ್ಲ ಟೆಲಿವಿಷನ್ ಚಾನೆಲ್ಗಳ ಅಂಕಿ ಅಂಶಗಳನ್ನು ಕ್ರೋದಿಕರಿಸಿ ಕಿರುಸ್ಚ್ತ್ರಗಳಂತೆ ಚಿತ್ರ ಮಾಡಿ ಇದನ್ನು ವೀಕ್ಷಕರ  ಟೆಲಿವಿಷನ್ನಿಂದ ಸಂಗ್ರಹಿಸಿದ ಚಿತ್ರಗಳೊಂದಿಗೆ ತುಲನೆ ಮಾಡಿ ವಿವಿದ ಚಾನೆಲ್ಲುಗಳ ವೀಕ್ಷಣ ಮಟ್ಟವನ್ನು ನಿರ್ದರಿಸಳಗುತದೆ.

ಟೆಲಿವಿಷನ್  ರೇಟಿಂಗ್ ಪಾಯಿoಟ್ಸ್ ಕಂಡುಹಿಡಿಯುವ ವಿದಾನದಲ್ಲಿ ಅತಿ ಮುಕ್ಕ್ಯವಾದುಅದ್ದು ' ಆರಿಸಿಕೊಂಡ ವೀಕ್ಷಕರ ಟೆಲಿವಿಷನ್ ಸಂಖ್ಯೆ '
ಈಗಿನ ರೇಟಿಂಗ್ ಪಾಯಿಂಟ್ಸ್ ಕಂಡುಹಿಡಿಯುವ ವಿದನದಲ್ಲಿ ಪುರ ಭಾರತದಲ್ಲಿ ಕೆಲವು ಪಟ್ಟನಗಳ ೫೫೦೦ (5500) ಮನೆಗಳ ವೀಕ್ಷಣೆಯನ್ನು ಆದ್ಧರಿಸಿ ತ್ಯಾರಿಸಲ್ಪದುವುದು. ವಿಮರ್ಶಕರು ಎಷ್ಟು ಕಡಿಮೆ ವೀಕ್ಷಕರಿಂದ ಬಂದ ಟಿ.ಅರ್.ಪಿ. ಇಡೀ ಭಾರತದ ಟಿ.ಅರ್.ಪಿ ಹೇಗಾಗುತದೆ ಎಂದು ಸಂದೆಹಿಸುವುದು ನ್ಯಯವಾಗೆ ಇದೆ.

ನಮ್ಮ ದೂರದರ್ಷನದವರು ಟಿ.ಅರ್.ಪಿ. ಕಂಡುಹಿಡಿಯಲು ಅವರದೇ ಆದ ವಿದ್ಧನವನ್ನು ಅನುಸರಿಸುತ ಬಂದಿದ್ಧಾರೆ. ಅದಕ್ಕೆ ಕೊಟ್ಟ ಹೆಸರು 'ದೂರದರ್ಶನ್ ಆಡಿಯನ್ಸ್ ರೇಟಿಂಗ್.'
ಇದರಲ್ಲಿ ದೂರದರ್ಷನದವರು ಆಯ್ದ ವೀಕ್ಷಕರ ಮನೆಗೆ ಡೈರಿ ಪುಸ್ತಕಗಳನ್ನು ಹಂಚುಥಾರೆ. ಅದರಲ್ಲಿ ವೀಕ್ಷಕರು ತಾವು ಮತ್ತು ತಮ್ಮ ಮನೆಯವರು ನೋಡುವ ಎಲ್ಲ ದೂರದರ್ಷನ ಕಾರ್ಯಕ್ರಮಗಳನ್ನುದೈರಿ ಪುಸ್ತಕಗಳಲ್ಲಿ ಬರೆಯಲು ಹೇಳುತ್ತಾರೆ. ವಾರದ ಕೊನೆಗೆ ಸಿಬ್ಬಂದಿ ಇದನ್ನು ಸಂಗ್ರಹಿಸಿ ದೂರದರ್ಶನ ಕೇಂದ್ರಕ್ಕೆ ಕಳುಹಿಸಿ ಅಲ್ಲಿ ಟಿ.ಅರ್.ಪಿ.ಯನ್ನು ಲೆಕ್ಕ ಹಾಕಲಾಗುತ್ತದೆ - ಸಂಗ್ರಹ